ನಿಮ್ಮೊಳಗೆ ಮೃದುವಾಗಿ ಒಳಹೊಕ್ಕಿ :- ನಿಮ್ಮ ದುಃಖದಿಂದ ಹೊರಬರಲು ಸಹಾಯ ಮಾಡುವ ಒಂದು ಅವಕಾಶವನ್ನು ಧ್ಯಾನಕ್ಕೆ ಕೊಡಿ

ಜೀವನ ಮತ್ತು ಪ್ರೇಮವನ್ನು ಪ್ರಕೃತಿಯು ಒಂದಾಗಿ ಬೆಸೆದಿದೆ. ನಾವು ಹುಟ್ಟಿದಾಗಿನಿಂದಲೂ ಬಂಧನಗಳಿಂದ ಬಂಧಿತರಾಗಿದ್ದೇವೆ – ಮನೆಗೆ, ವಸ್ತುಗಳಿಗೆ, ಅನುಭವಗಳಿಗೆ ಮತ್ತು ಸಂಬಂಧಗಳಿಗೆ. ನಾವು ಪ್ರೀತಿಸುವವರನ್ನು ಕಳೆದುಕೊಂಡಾಗ ವಾಸ್ತವತೆಯು ನಮ್ಮನ್ನು ಬಲವಾಗಿ ಬಡಿಯುತ್ತದೆ. ದುಃಖವು ಸಹಜ ಮತ್ತು ಕೆಲವೊಮ್ಮೆ ಅದನ್ನು ತಳ್ಳಿಹಾಕಲು ಸಾಧ್ಯವೇ ಇಲ್ಲ.

ಎಲ್ಲರೂ ತಮ್ಮದೇ ರೀತಿಯಲ್ಲಿ ದುಃಖವನ್ನು ನಿಭಾಯಿಸುತ್ತಾರೆ. ಆದರೆ ಭಾವನೆಯು ನಿಮ್ಮನ್ನು ಆವರಿಸಿಬಿಡದಂತೆ ಎಚ್ಚರವಹಿಸಬೇಕು. ಜೀವನದ ಸರಳವಾದ ಸತ್ಯಗಳಿಂದ ಮುನ್ನಡೆಯಬಹುದು. ಅಂತಹ ಸಮಯಗಳಲ್ಲಿ ಪ್ರತಿದಿನ ಕೆಲವು ನಿಮಿಷಗಳ ಮೌನದಲ್ಲಿ ಕುಳಿತುಕೊಳ್ಳಬೇಕು. ಧ್ಯಾನದಿಂದ ನಮ್ಮ ಬಿಟ್ಟುಬಿಡುವ ಸಾಮಥ್ರ್ಯ ಹೆಚ್ಚುತ್ತದೆ ಮತ್ತು ಖಂಡಿತವಾಗಿಯೂ ನಮ್ಮ ದುಃಖದಿಂದ ಹೊರಬರಬಹುದು. ಗೊಂದಲದಿಂದ ತುಂಬಿರುವ ಮನಕ್ಕೆ ಪ್ರಶಾಂತಿಯನ್ನು ಧ್ಯಾನವು ತರುತ್ತದೆ.

ದುಃಖದ ಸಾಮಾನ್ಯವಾದ ಲಕ್ಷಣಗಳು :-

  • ದಣಿವು, ಸುಸ್ತು
  • ಚಡಪಡಿಕೆ

  • ನೋವುಗಳು
  • ಉಸಿರಾಟದಲ್ಲಿ ತೊಂದರೆ
  • ಕುಗ್ಗಿದ ಹಸಿವು

  •   ಕಾಲವು ಅದನ್ನು ನಿಭಾಯಿಸುತ್ತದೆ

ನಿಮ್ಮ ಪ್ರೀತಿಪಾತ್ರರು ದಾಟಿ ಹೋದರೆ ನೀವು ದುಃಖದಿಂದ ಆವರಿಸಲ್ಪಡುತ್ತೀರಿ. ಆದರೆ ಇದನ್ನು ಒಂದು ವಿಶಾಲವಾದ ದೃಷ್ಟಿಕೋನದಿಂದ ನೋಡಿ. ನಾವೆಲ್ಲರೂ ಒಂದು ದಿನ ಹೋಗಲೇಬೇಕು. ಕೆಲವರು ಶೀಘ್ರವಾಗಿ ತಮ್ಮ ಪ್ರಯಾಣವನ್ನು ಬೆಳೆಸಿದ್ದಾರೆ. ನೀವು ಅದರ ನಂತರ ಪ್ರಯಾಣವನ್ನು ಬೆಳಸುತ್ತೀರಿ, ಅಷ್ಟೆ. ಎಲ್ಲದರ ನಶ್ವರತೆಯನ್ನು ಕಂಡಾಗ, ದುಃಖದಿಂದ ಹೊರಬರುವ ಬಲ ನಿಮಗೆ ಸಿಗುತ್ತದೆ. ಮತ್ತೆ ಮತ್ತೆ ಎಲ್ಲದರ ನಶ್ವರತೆಯ ಮೇಲೆ ನಿಮ್ಮ ಗಮನವನ್ನು ತನ್ನಿ”.

- ಗುರುದೇವ್ ಶ್ರೀ ಶ್ರೀ ರವಿಶಂಕರ್

ನಾಲ್ಕು ರೀತಿಗಳಿಂದ ದುಃಖದಿಂದ ಹೊರಬಹುದು

1) ನೀವು ಬಲಿಷ್ಠರಾದವರು ಎಂದು ತಿಳಿಯಿರಿ

  ನಿಮ್ಮಲ್ಲಿ ಬಲವಿದೆ ಎಂದು ತಿಳಿಯಿರಿ. ಸಮಸ್ಯೆ ಬಂದಿದೆ, ದುಃಖವು ಬಂದಿದೆ. ಅದರ ಬಗ್ಗೆ ನೀವು ಏನನ್ನೂ ಮಾಡಲು ಸಾಧ್ಯವಿಲ್ಲ. ಧ್ಯಾನ ಮಾಡುವುದರಿಂದ ನಿಮ್ಮ ಪ್ರೀತಿ ಪಾತ್ರರಾದವರೊಡನೆ ನೀವು ಕಳೆದ ಅಮೂಲ್ಯವಾದ ಸಮಯವನ್ನು ಮತ್ತಷ್ಟು ಅಮೂಲ್ಯವಾಗಿಡಲ್ಪಡುತ್ತದೆ. ಇದರಿಂದ ನೀವು ಬಹಳ ಹಗುರವಾಗುತ್ತೀರಿ, ಸಂತೋಷವಾಗಿರುತ್ತೀರಿ.

2) ಜೀವನದ ಸತ್ಯದ ಬಗ್ಗೆ ಚಿಂತನೆ ಮಾಡಿ

  ಎಲ್ಲರೂ ಒಂದು ದಿನ ಸಾಯಲಿದ್ದಾರೆ ಎಂದು ತಿಳಿಯಿರಿ. ಇಲ್ಲಿರುವ ಎಲ್ಲರೂ ಮಣ್ಣಿನ ಕೆಳಗೆ ಹೋಗಲಿದ್ದಾರೆ. ಎಲ್ಲವೂ ಮುಂದಿನ 100 ವರ್ಷಗಳಲ್ಲಿ ನಡೆಯಲಿದೆ. ಯಾರೋ ಬೇಗನೆ ಹೊರಟರು. ನಾವು ಬೆಳಿಗ್ಗೆ ಎದ್ದಾಗ ಒಂದು ಕ್ಷಣಕ್ಕೆ ಎಲ್ಲವೂ ಸರಿಯಾಗಿದೆ ಅನಿಸುತ್ತದೆ, ಆದರೆ ಕ್ಷಣಗಳಲ್ಲೆ ವಾಸ್ತವತೆಯು ಬಡಿಯುತ್ತದೆ ಮತ್ತು ಮನಸ್ಸು ಮತ್ತೆ ಅಲೆಯಲಾರಂಭಿಸುತ್ತದೆ. ದಿನಚರಿಯ ಚಟುವಟಿಕೆಗಳನ್ನು ಮುಂದುವರಿಸಿ - ವ್ಯಾಯಾಮ, ಓದುವುದು, ಸ್ನೇಹಿತರೊಡನೆ ಕಾಲ ಕಳೆಯುವುದು, ಧ್ಯಾನ ಮಾಡುವುದು. ನಿಮ್ಮನ್ನು ಪೆÇೀಷಿಸಿಕೊಳ್ಳುವುದನ್ನು ಕಲಿಯಿರಿ. ನೀವು ಅನುಭವಿಸುವುದೆಲ್ಲವೂ ವಿಕಸಿತವಾಗಲು ಬಿಡಿ, ಸಹಜವಾಗಿ ಸಂಬಂಧಪಡಿಸಿಕೊಳ್ಳಿ, ಮತ್ತದೇ ಸಮಯದಲ್ಲಿ ನಿಮ್ಮ ಹಿತವನ್ನೂ ಕಾಯ್ದುಕೊಳ್ಳಿ.

3) ಕುಟುಂಬದೊಡನೆ, ಜಗತ್ತಿನೊಡನೆ ಹೆಚ್ಚಾಗಿ ಸಂಬಂಧಪಡಿಸಿಕೊಳ್ಳಿರಿ

  ನಿಮಗಿಂತಲೂ ಹೆಚ್ಚು ಸಮಸ್ಯೆಗಳನ್ನು ಹೊಂದಿರುವ ಇತರರನ್ನೂ ನೋಡಿ. ಹೆಚ್ಚು ಕಷ್ಟಗಳಿರುವ ಜನರನ್ನು ಕಂಡಾಗ ಅವರಿಗೆ ಸೇವೆ ಮಾಡಲು ಆರಂಭಿಸಿ. ಆಗ ಸಮಸ್ಯೆಗಳು ಮಾಯವಾಗುತ್ತವೆ. ದುಃಖವು ಸಹಜವಾದದ್ದು ಮತ್ತು ಅದನ್ನು ನಿಭಾಯಿಸುವುದು ಅಷ್ಟೇನು ಸುಲಭವಾದ ವಿಷಯವಲ್ಲ. ನಿಮ್ಮ ಸ್ನೇಹಿತರೊಡನೆ, ಕುಟುಂಬದವರೊಡನೆ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಆರಂಭಿಸಿ. ಅಂತಹ ಸಮಯದಲ್ಲಿ ಕುಟುಂಬದ ಸದಸ್ಯರು ನಿಮಗೆ ಆಧಾರವಾಗಿರಲು ಸದಾ ಮುಂದಾಗಿರುತ್ತಾರೆ.

4) ದುಃಖಕ್ಕಾಗಿ, ನಷ್ಟಕ್ಕಾಗಿ ಧ್ಯಾನ

  ತಾವು ಕಳೆದುಕೊಂಡಿರುವ ವ್ಯಕ್ತಿಯನ್ನು ಪದೇ ಪದೇ ನೆನಪಿಸಿಕೊಳ್ಳುವುದು ಸರ್ವೇಸಾಮಾನ್ಯ. ಧ್ಯಾನದ ಮೂಲಕವೂ ಈ ಅಮೂಲ್ಯವಾದ ಆಂತರಿಕ ಸಂಬಂಧವನ್ನು ನಮ್ಮೊಡನೆ ಬೆಳೆಸಿಕೊಂಡು ಪೆÇೀಷಿಸಬಹುದು. ನಿಮಗೆಂದು ಪ್ರತಿದಿನ 20 ನಿಮಿಷಗಳನ್ನು ನಿಮಗೆಂದು ಮೀಸಲಿಟ್ಟು, ಕಣ್ಣುಗಳನ್ನು ಮುಚ್ಚಿಕೊಳ್ಳಿ. ನಷ್ಟವಾದಾಗ ಅಥವಾ ದುಃಖದಲ್ಲಿದ್ದಾಗ ಧ್ಯಾನ ಮಾಡಿದರೆ ನಿಮ್ಮ ಆಲೋಚನೆಗಳು ನೆಲೆ ನಿಲ್ಲುತ್ತವೆ ಮತ್ತು ನಿಮ್ಮ ಮನಸ್ಸು ಪ್ರಶಾಂತವಾಗುತ್ತದೆ. ನಿಮ್ಮ ಉಸಿರಿನ ಮೇಲೆ ಗಮನವನ್ನಿಡುತ್ತಾ ಹೆಚ್ಚು ಹೆಚ್ಚು ವಿಶ್ರಮಿಸಿ. ದೈವವು ನಿಮ್ಮೊಡನಿದೆಯೆಂದು ತಿಳಿಯಿರಿ. ನಿಮ್ಮ ಸಮಸ್ಯೆಗಳನ್ನೆಲ್ಲಾ ದೈವಕ್ಕೆ ಅರ್ಪಿಸಿ ವಿಶ್ರಮಿಸಿ. ಆ ವಿಶ್ವಾಸ ನಮ್ಮಲ್ಲಿರಬೇಕು. ನಾವು ಪ್ರಶಾಂತರಾಗಿದ್ದಾಗ ಶಾಂತಿಯನ್ನು ಹರಡಬಹುದು. ನಾವು ಸಂತೋಷದಿಂದಿದ್ದರೆ ನಮ್ಮ ಸುತ್ತಲೂ ಸಂತೋಷವನ್ನು ಹೊರಸೂಸಿ, ಸಂತೋಷವನ್ನು ಹರಡಬಹುದು. ಮನಸ್ಸಿನ ಈ ಸ್ಥಿತಿಯಲ್ಲಿ ನಿಮಗೆ ಹೇಗೆ ಅನಿಸುತ್ತಿದೆ ಎಂಬುದರ ಬಗ್ಗೆ ಅರಿವಿರಲಿ. ಆಲೋಚನೆಗಳನ್ನು ಹರಿಯಲು ಬಿಡಿ, ಅಂತರಾಳದ ಶಾಂತಿ ಮತ್ತು ಬೆಚ್ಚನೆಯ ಭಾವವನ್ನು ಅನುಭವಿಸಿ. ವರ್ತಮಾನದ ಕ್ಷಣದೊಡನೆ ಇರಿ ಮತ್ತು ಆ ಧ್ಯಾನಸ್ಥವಾದ ಸ್ಥಿತಿಯಲ್ಲಿದ್ದು ಆನಂದಿಸಿ. ಇದರ ಬಗ್ಗೆ ಆರ್ಟ್ ಆಫ್ ಲಿವಿಂಗ್‍ನಿಂದ ಬೋಧಿಸಲ್ಪಡುವ ಸಹಜ ಸಮಾಧಿ ಧ್ಯಾನದ ಕಾರ್ಯಕ್ರಮದಲ್ಲಿ ಮತ್ತಷ್ಟು ತಿಳಿಯಿರಿ.

ಗುರುದೇವ್ ಶ್ರೀ ಶ್ರೀ ರವಿಶಂಕರರ ಪ್ರವಚನಗಳಿಂದ ಸ್ಫೂರ್ತಿ ಪಡೆದ ಲೇಖನ.

ಡಾ || ಸೀಮ ಥಾನೇದಾರ್ ಮತ್ತು ಡಾ|| ಶಿಲ್ಪ ಸಭರ್ವಾಲ್, ಶಿಕ್ಷಕರು, ಆರ್ಟ್ ಆಫ್ ಲಿವಿಂಗ್‍ರವರ ಸಹಾಯ